ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ಸುದ್ದಿ ಮತ್ತು ಕಾರ್ಯಕ್ರಮಗಳು

ದಿನಾಂಕ 11-06-2017 ರಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ದ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಒಟ್ಟು 43 ಜೋಡಿಗಳು ಭಾನುವಾರ ಬೆಳಿಗ್ಗೆ 9.30 ರಿಂದ 10.26 ಶುಭ ಕರ್ಕಾಟಕ ಲಗ್ನದಲ್ಲಿ ನವ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಈ ಸಮಾರಂಭದಲ್ಲಿ ಷ||ಬ್ರ|| ಪ್ರಣವ ಶ್ರೀ ಪಟ್ಟದ ಗುರುಸ್ವಾಮಿಗಳು (ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು, ಮ.ಬೆಟ್ಟ), ಶ್ರೀ ಯು.ಟಿ.ಖಾದರ್( ಮಾನ್ಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು), ಶ್ರೀ ಆರ್. ನರೇಂದ್ರ( ಮಾನ್ಯ ಶಾಸಕರು, ಹನೂರು ವಿಧಾನಸಭಾ ಕ್ಷೇತ್ರ) ಹಾಗು ಕೆ. ಎಂ. ಗಾಯತ್ರಿ ಕ. ಆ. ಸೇ(ಹಿ.ಶ್ರೇ) ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮ.ಬೆಟ್ಟ ಮತ್ತು ದೇವಸ್ಥಾನದ ಸಿಬ್ಬಂದಿ ವರ್ಗ ಮತ್ತು ಬೇಡಗಂಪಣ ಅರ್ಚಕ ವೃಂದ ದವರು ಪಾಲ್ಗೊಂಡಿದ್ದರು.
next..